core-banking-system

ಕೋರ್ ಬ್ಯಾಂಕಿಂಗ್

ದಿನಾಂಕ 24-02-2012 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಮ್ಮ ಬ್ಯಾಂಕಿನ ವ್ಯವಹಾರವನ್ನು ನಬಾರ್ಡ್ ನಿಯೋಜಿತ ಕೋರ್ ಬ್ಯಾಂಕಿಂಗ್ ತಂತ್ರಾಂಶವನ್ನು ಅಳವಡಿಸಲು ತೀರ್ಮಾನವಾಗಿದ್ದು, ಅದರಂತೆ ದಿನಾಂಕ 06-06-2012 ರಂದು ನಬಾರ್ಡ್‍ನೊಂದಿಗೆ ಒಪ್ಪಂದಮಾಡಿಕೊಳ್ಳಲಾಗಿರುತ್ತದೆ. ನಬಾರ್ಡ್ ಆಯ್ಕೆ ಮಾಡಿದ ಟಿ.ಸಿ.ಎಸ್. ಸಾಫ್ಟವೇರನ್ನು ನಮ್ಮ ಬ್ಯಾಂಕಿನ ವ್ಯವಹಾರಕ್ಕೆ ಅಳವಡಿಸಲು ನಬಾರ್ಡ್‍ನ ಮಾರ್ಗದರ್ಶನದಂತೆ ದಿನಾಂಕ 21-09-2012 ರಂದು ಟಿ.ಸಿ.ಎಸ್. ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗಾಗಲೇ ಬ್ಯಾಂಕಿನ ಎಲ್ಲಾ ಶಾಖೆಗಳ ವ್ಯವಹಾರವನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಅಳವಡಿಸಲಾಗಿರುತ್ತದೆ. ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಿಕೊಂಡ ನಂತರ ನಮ್ಮ ಬ್ಯಾಂಕಿನಲ್ಲಿಯೂ RTGS ಮತ್ತು NEFT ವ್ಯವಹಾರಗಳನ್ನು ಪ್ರಾರಂಭಿಸಲಾಗಿರುತ್ತದೆ.

ನಮ್ಮ ಬ್ಯಾಂಕಿನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕೆ.ಸಿ.ಸಿ.ಸಾಲ ಪಡೆದ ರೈತರಿಗೆ “ರೂಪೇ ಕೆ.ಸಿ.ಸಿ. ಡೆಬಿಟ್ ಕಾರ್ಡ” ಮತ್ತು ಗ್ರಾಹಕರಿಗೆ ರೂಪೇ ಡೆಬಿಟ್ ಕಾರ್ಡ್‍ಗಳನ್ನು ನೀಡಲಾಗಿರುತ್ತದೆ. ಭಾರತ ಸರ್ಕಾರವು ಘೋಷಿಸಿರುವ ಸಾಮಾಜಿಕ ಭದ್ರತಾ ವಿಮಾ ಯೋಜನೆಗಳನ್ನು ಸಹ ಅಳವಡಿಸಿಕೊಂಡು ಗ್ರಾಹಕರುಗಳಿಗೆ ಸಾಮಾಜಿಕ ಭದ್ರತೆಯನ್ನು ಬ್ಯಾಂಕು ನೀಡಲಾಗಿರುತ್ತದೆ.

ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ DBT(ನೇರ ನಗದು ವರ್ಗಾವಣೆ ವ್ಯವಹಾರಗಳಾದ ಗ್ಯಾಸ್ ಸಬ್ಸಡಿ,ಗೊಬ್ಬರ ಸಬ್ಸಡಿ,ವಿಧ್ಯಾರ್ಥಿ ವೇತನ ಮತ್ತು ಸರ್ಕಾರದ ಇತರೆ ಸಹಾಯಧನಗಳು) ವ್ಯವಹಾರವನ್ನು ಮತ್ತು ಅವರ ಖಾತೆಯಲ್ಲಿನ ಬ್ಯಾಂಕಿನ ವ್ಯವಹಾರದ ಮಾಹಿತಿಯನ್ನು ತಕ್ಷಣವೇ ತಿಳಿಸುವ ಸಂಬಂಧ SMS ALERT ಸೇವೆಯನ್ನು ಸಹ ಪ್ರಾರಂಭಿಸಲಾಗಿರುತ್ತದೆ.